ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಂಗನಾಯಕ ಮಾರ್ಚ್ 8 ರಂದು ಬಿಡುಗಡೆ ಕಾಣುತ್ತಿದೆ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಎ.ಆರ್.ವಿಖ್ಯಾತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮಠ ಗುರುಪ್ರಸಾದ್ ನಿರ್ದೇಶನವಿದೆ ನವರಸ ನಾಯಕ ಜಗ್ಗೇಶ್ , ಗುರುಪ್ರಸಾದ್, ರಚಿತಾ ಮಹಾಲಕ್ಷ್ಮಿ, ಚೈತ್ರಾ ಕೊಟ್ಟೂರು, ಎಂ.ಕೆ.ಮಠ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಅನೂಪ್ ಸೀಳಿನ್ ಸಂಗೀತ, ಸಾಮ್ರಾಟ್ ಅಶೋಕ್ ಗೌತಂ ಛಾಯಾಗ್ರಹಣ, ಉಮೇಶ್ ಬಿ.ಆರ್ ಸಂಕಲನ, ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ.